ಅಪ್ಪರ್ 
	ಅರುವತ್ತುಮೂರು ಪುರಾತನರಲ್ಲಿ ಒಬ್ಬ. ತಮಿಳುನಾಡಿನಲ್ಲಿ ಪ್ರಸಿದ್ಧರಾದ ಸುಂದರ್, ಮಾಣಿಕ್ಯ ವಾಚಕರ್, ತಿರುಜ್ಞಾನ ಸಂಬಂಧರ್ ಸಮಯಾ ಚಾರ್ಯರ್ ಎಂದು ಪರಿಗಣಿಸಲ್ಪಟ್ಟಿದ್ದಾನೆ. ಪೆರಿಯಪುರಾಣದಲ್ಲಿ ಈತನಿಗೆ ತಿರುನಾವುಕ್ಕರಸು ಎಂದೂ ಪುರಾತನಭಕ್ತವಿಲಾಸ ಎಂಬ ಸಂಸ್ಕøತ ಗ್ರಂಥದಲ್ಲಿ ವಾಗೇಶಃ ಎಂದು ಕನ್ನಡ ಅರುವತ್ತುಮೂರರ ಪುರಾಣಗಳಲ್ಲಿ ವಾಗೇಶ ಎಂದೂ ಹೆಸರು. ತಮಿಳು ವೇದವೆನಿಸಿದ ತೇವಾರವನು ರಚಿಸಿದ ಪ್ರಖ್ಯಾತ ನಾಲ್ವರು ಸಮಯಾಚಾರ್ಯರಲ್ಲಿ ಈತನೂ ಒಬ್ಬ.  

(ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ